Content-Length: 170838 | pFad | http://kn.wikipedia.org/wiki/%E0%B2%86%E0%B2%B9%E0%B2%BE%E0%B2%B0

ಆಹಾರ - ವಿಕಿಪೀಡಿಯ ವಿಷಯಕ್ಕೆ ಹೋಗು

ಆಹಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮತೋಲಿತ ಪಥ್ಯಕ್ಕೆ ಅಹಾರದ ವಿಧಗಳು

ಆಹಾರ ಸಾಮಾನ್ಯವಾಗಿ ಪಿಷ್ಟ, ಕೊಬ್ಬು ಮತ್ತು/ಅಥವಾ ಪ್ರೋಟೀನ್‍ಗಳನ್ನು ಒಳಗೊಂಡು, ಜೀವಿಗಳು ಪೋಷಕಾಂಶಗಳಿಗಾಗಿ ಅಥವಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ ಸಸ್ಯಗಳಿಂದ, ಪ್ರಾಣಿಗಳಿಂದ ಅಥವಾ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ. ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ಟವಾದ ಆಹಾರಗಳಿದ್ದು, ಅವು ಕೆಲವೊಂದು ಸಂಸ್ಕೃತಿಯನ್ನು ಸಾರುವುದು ನಾವು ಕಾಣುತ್ತೇವೆ. ಸಾಮಾನ್ಯವಾಗಿ ಸಸ್ಯಗಳು ಅಥವಾಾ ಸಸ್ಯಗಳ ಭಾಗಗಳನ್ನು ನಾವು ಆಹಾರವಾಗಿ ಉಪಯೋಗಿಸುತ್ತೇವೆ. ಸುಮಾರು ೨೦೦೦ ಸಾವಿರಕ್ಕೂ ಹೆಚ್ಚು ಸಸ್ಯಗಳನ್ನು ನಾವು ಆಹಾರಕ್ಕಾಗಿ ಬೆಳೆಸುತ್ತಿದ್ದು, ಪ್ರತಿಯೊಂದು ಕೂಡ ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಸಸ್ಯಗಳ ಬೀಜಗಳು ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಪ್ರಾಣಿಗಳಿಗೆ (ಮಾನವನನ್ನು ಸೇರಿಸಿ)ಅತ್ಯಂತ ಉಪಯುಕ್ತ. ಇಂದು ಮಾನವ ಉಪಯೋಗಿಸುವ ಆಹಾರದ ಬಹುಪಾಲು ಕಾಳು (ಬೀಜ) ಅಥವಾ ಬೀಜೋತ್ಪನ್ನಗಳೇ ಆಗಿರುವುದು ನಮ್ಮ ಗಮನಕ್ಕೆ ಬರುವ ಇನ್ನೊಂದು ಅಂಶ. ಏಕದಳ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು ಇದರಲ್ಲಿ ಸೇರಿವೆ. ಇವುಗಳ ಜೊತೆಗೆ ಅನೇಕ ಹಣ್ಣುಗಳು (ಬೀಜವನ್ನೊಳಗೊಂಡು) ಮಾನವ ಮತ್ತು ಇತರ ಪ್ರಾಣಿಗಳಿಗೆ ಆಹಾರವಾಗಿವೆ. ಟೊಮ್ಯಾಟೊದಂತಹ ಅನೇಕ ಹಣ್ಣುಗಳನ್ನು ನಾವು ತರಕಾರಿಯ ರೂಪದಲ್ಲಿಯೂ ಉಪಯೋಗಿಸುವುದು ನಾವು ಕಾಣುತ್ತೇವೆ. ಧಾನ್ಯಗಳು ಮತ್ತು ಹಣ್ಣುಗಳ ನಂತರ ತರಕಾರಿಗಳು ಕೂಡ ಪ್ರಾಣಿಗಳ ಆಹಾರದಲ್ಲಿ ಪಾಲು ಹೊಂದಿದೆ. ಕೆಲವು ತರಕಾರಿ ಬೇರಿನ ರೂಪ, ಕೆಲವು ಎಲೆಯಂಥಹವು, ಕಾಂಡದ ಮತ್ತು ಹೂವಿನ ಭಾಗಗಳನ್ನು ತರಕಾರಿಯ ಹಾಗೇ ಉಪಯೋಗಿಸುತ್ತೇವೆ.

ಪ್ರಾಣಿಗಳು

[ಬದಲಾಯಿಸಿ]

ಕೆಲವೊಮ್ಮೆ ಪ್ರಾಣಿಗಳನ್ನು ಕೂಡ ನೇರವಾಗಿ ಅಥವಾ ಬೇರೆ ವಿಧದಲ್ಲಿ (ಅವುಗಳಿಂದ ಉತ್ಪಾದಿಸಿದ ಆಹಾರ) ಉಪಯೋಗಿಸುತ್ತೇವೆ. ಮಾಂಸಸೇವನೆ ನೇರ ಉಪಯೋಗಕ್ಕೆ ಒಂದು ಉದಾಹರಣೆ. ಪ್ರಾಣಿಗಳಿಂದ ಉತ್ಪಾದನೆಯಾದ ಆಹಾರ ಉತ್ಪನ್ನಗಳು ಉದಾ. ಸಸ್ತನಿಗಳಿಂದ ಹಾಲು; ಇದನ್ನು ಅನೇಕ ವೇಳೆ ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸುವುದುಂಟು. ಇದರ ಜೊತೆಯಲ್ಲಿ ಅನೇಕ ಪಕ್ಷಿಗಳಿಂದ ನಮಗೆ ಮೊಟ್ಟೆಯು ದೊರಕುವುದು. ಜೇನುಹುಳುಗಳಿಂದ ಜೇನುತುಪ್ಪ ಪಡೆದು ಅನೇಕ ಆಹಾರದಲ್ಲಿ ಉಪಯೋಗಿಸುತ್ತೇವೆ.

ಉತ್ಪಾದನೆ

[ಬದಲಾಯಿಸಿ]

ಸಾಮಾನ್ಯವಾಗಿ ಆಹಾರವನ್ನು ನಾವು ವ್ಯವಸಾಯ, ಬೇಟೆ ಅಥವಾ ಮೀನುಗಾರಿಕೆಯಿಂದ, ಇಲ್ಲವಾದಲ್ಲಿ ಸ್ಥಳೀಯವಾದ ಇನ್ನಾವುದೇ ವಿಧಾನದಿಂದ ಪಡೆಯುತ್ತೇವೆ. ಇತ್ತೀಚಿನ ದಿನಗಳಲ್ಲಿ ನಿಯಮಿತವಾದ ವ್ಯವಸಾಯದಿಂದ ಅಧಿಕ ಇಳುವರಿಯನ್ನು ಪಡೆಯುತ್ತಿದ್ದೇವೆ. ಇದು ಸಹಜವಾಗಿ ಗ್ರಾಹಕರ ಬೇಡಿಕೆ, ಸ್ಥಳೀಯ ಆಹಾರ ಸ್ವಾವಲಂಬನೆ ಮತ್ತು ಸಾವಯವ ವ್ಯವಸಾಯವನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಅಂತರಾಷ್ಟ್ರೀಯ ಸಂಸ್ಥೆಗಳು ( ವಿಶ್ವ ವ್ಯಾಪಾರ ಒಕ್ಕೂಟ, ಸಾಮಾನ್ಯ ವ್ಯವಸಾಯ ನೀತಿ), ರಾಷ್ಟ್ರೀಯ ನೀತಿ, ಯುದ್ಧಗಳ ಮೇಲೆ ಅವಲಂಬಿತವಾಗಿದೆ.

ಸಾಮಾನ್ಯವಾಗಿ ಮಾನವನು ಐದು ಬಗೆಯ ರುಚಿಗಳನ್ನು ಗುರುತಿಸಬಲ್ಲವನಾಗಿದ್ದಾನೆ. ಸಿಹಿ, ಉಪ್ಪು, ಖಾರ, ಒಗರು ಮತ್ತು ಹುಳಿಯನ್ನು ಗುರುತಿಸುವನು. ಸಾಮಾನ್ಯವಾಗಿ ನಮಗೆ ಶಕ್ತಿಯನ್ನು ಕೊಡುವ ಸಿಹಿ ಅಥವಾ ಕೊಬ್ಬು ಪದಾಥ೯ಗಳನ್ನು ಮಾನವ ಇಷ್ಟಪಟ್ಟು ತಿನ್ನುವನು. ಹುಳಿ, ಒಗರು ಪದಾಥ೯ಗಳನ್ನು ಅಷ್ಟಾಗಿ ಇಚ್ಛಿಸಿ ತಿನ್ನುವುದಿಲ್ಲ. ಜೀವನಕ್ಕೆ ಅತ್ಯವಶ್ಯಕವಾದ ನೀರಿಗೆ ಯಾವುದೇ ರುಚಿ ಇರುವುದಿಲ್ಲ.

ಮನಸ್ಸಿಗೆ ಅತ್ಯಂತ ಖುಷಿ ಕೊಡುವ ಒಂದು ರುಚಿ. ಸಿಹಿಯು ಒಂದು ಬಗೆಯ ಸಕ್ಕರೆಯ ಅಂಶಗಳಾದ ಗ್ಲುಕೋಸ್, ಫ್ರಕ್ಟೋಸ್ ಅಥವಾ ಸುಕ್ರೋಸ್ ನ್ ಅಣುಗಳಿಂದ ಸಿಗುವುದು. ನಮ್ಮ ದೇಹಕ್ಕೆ ಶಕ್ತಿಯನ್ನು ಪೂರೈಸುವ ಪ್ರಮುಖ ಅಂಶ ಸಿಹಿಯಾಗಿರುವುದು ಮತ್ತು ನಮ್ಮ ಉಳಿವಿಗೆ ಅವಶ್ಯಕ ಅಂಶವು ಹೌದು. ನಾವು ದಿನನಿತ್ಯ ತಿನ್ನುವ ಆಹಾರವನ್ನು ಪೌಷ್ಠಿಕಾಂಶಗಳ ದೃಷ್ಟಿಯಿಂದ ರಾಸಾಯನಿಕವಾಗಿ ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ೧. ಪ್ರೋಟೀನುಗಳು(ಸಸಾರಜನಕಗಳು) ೨. ಪಿಷ್ಟಶರ್ಕರಗಳು(ಕಾರ್ಬೋಹೈಡ್ರೇಟುಗಳು)

ಮಳೆಗಾಲದಲ್ಲಿ ಯಾವ ಆಹಾರ ದೇಹಕ್ಕೆ ಉತ್ತಮ ಗೊತ್ತಾ?

ಮಳೆಗಾಲ ಬಂತೆಂದರೆ ಸಾಕು ಏನೋ ಅರಿಯದ ಸಂತಸ, ಮನುಷ್ಯನೂ ಸೇರಿದಂತೆ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ವರ್ಷ ಋತು ಪರಿಣಾಮ ಬೀರುತ್ತದೆ. ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಕೂಡ ಬದಲಾಗಿಸಿಕೊಳ್ಳಬೇಕಾಗುತ್ತದೆ. ಕಾಲ ಬದಲಾದಂತೆ ನಮ್ಮ ಬಾಯಿ ರುಚಿ ಕೂಡ ಬದಲಾಗುತ್ತದೆ. ಬಾಯಿ ರುಚಿಗೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ಕೆಟ್ಟದು ಎಂದು ಗೊತ್ತಿರುವುದಿಲ್ಲ. ಅದು ರುಚಿ ರುಚಿಯಾದ ಆಹಾರವನ್ನು ಮಾತ್ರ ಬಯಸುತ್ತದೆ. ಆದರೆ ನಾಲಗೆಯ ರುಚಿಗಿಂತ ಆರೋಗ್ಯಕರ ಆಹಾರ ಮುಖ್ಯ.

ಮಳೆಗಾಲದಲ್ಲಿ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಯಾವ ಆಹಾರವನ್ನು ಮಿತವಾಗಿ ಬಳಸಹುದು ಎಂಬುದನ್ನು ತಿಳಿದುಕೊಳ್ಳೋಣ:

ಮಳೆಗಾಲದಲ್ಲಿ ಸೇವಿಸಬಹುದಾದ ಆಹಾರಗಳು:

ಈ ಸಮಯದಲ್ಲಿ ಸೋಂಕು ನಿವಾರಕ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಉದಾ: ಬಿನ್ಸ್, ಹಾಗಾಲಕಾಯಿ, ಅರಶಿಣ, ಮೆಂತೆ, ಜೋಳ, ಬಾರ್ಲಿ, ಗೋಧಿ, ಕಿತ್ತಲೆ ಮತ್ತು ನಿಂಬೆ ರಸ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.

ಬೇಸಿಗೆಯಲ್ಲಿ ತಿನ್ನಲು ಹಿತವೆನ್ನಿಸುವ ಮೊಸರನ್ನು ಮಳೆಗಾಲದಲ್ಲೂ ಬಳಸಿ, ಮೊಸರು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಶುಂಠಿ ಜೀರ್ಣಕ್ರಿಯೆಗೆ ಸಹಕಾರಿಯಾಗುವುದರಿಂದ ಆಹಾರ ಪದಾರ್ಥಗಳಲ್ಲಿ ಶುಂಠಿ ಸೇರಿಸಿ ಇದರೊಂಗೆ ಶುಂಠಿ ಟೀ ಮಾಡಿ ಕುಡಿಯುವುದು ಉತ್ತಮ. ಶುಂಠಿ ಜೀರ್ಣಕ್ರಿಯೆ ಜೊತೆಗೆ ದೇಹವನ್ನು ಬೆಚ್ಚಗಿಡುತ್ತದೆ. ಶೀತ, ಕೆಮ್ಮು ಇವುಗಳ ವಿರುದ್ದ ಹೋರಾಡುತ್ತದೆ.

ಇನ್ನು ವಿಶೇಷವಾಗಿ ಮಳೆಗಾಲದ ಆರಂಭದಲ್ಲಿ ಭೂಮಿಯಲ್ಲಿ ಕಾಣ ಸಿಗುವ ಪೌಷ್ಠಿಕಾಂಶಗಳನ್ನು ಹೊಂದಿರುವ ಆಹಾರ ಪದಾರ್ಥವೆಂದರೆ ಅಣಬೆ ಇದರ ಸೇವನೆಯೂ ಆರೋಗ್ಯಕರವಾದುದು.

ಸೊಪ್ಪಿನ ಆಹಾರ ಸೇವನೆ ಎಲ್ಲಾ ಸಮಯದಲ್ಲೂ ಆರೋಗ್ಯಕರವಾಗಿರುತ್ತದೆ ಆದರೆ, ಮಳೆಗಾಲದಲ್ಲಿ ಸೊಪ್ಪನ್ನುಶುಚಿ ಮಾಡುವಾಗ ತುಂಬಾನೆ ಜಾಗರೂಕರಾಗಿರಬೇಕು ಸೊಪ್ಪು ಪದಾರ್ಥಗಳಲ್ಲಿ ಕೀಟಾಣುಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ತಾಜಾ ಸೊಪ್ಪನ್ನೆ ತಿನ್ನಿ.

ಆರೋಗ್ಯದ ರಕ್ಷಣೆಗೆ ಮುಖ್ಯವಾಗಿ ಬೇಕಾಗಿರುವುದು ಶುದ್ದವಾದ ನೀರು. ಅನೇಕ ಕಾಯಿಲೆಗಳು ನೀರಿನಿಂದ ಬರುತ್ತದೆ ಆದ್ದರಿಂದ ನೀರನ್ನು ಕುದಿಸಿ ಕುಡಿಯಿರಿ.

ಬೀದಿ ಬದಿಯ ಆಹಾರಕ್ಕೆ ಬ್ರೇಕ್: ನಮ್ಮ ನಾಲಗೆಯು ಬೀದಿ ಬದಿಯ ಆಹಾರವನ್ನೇ ಹೆಚ್ಚು ಬಯಸುತ್ತದೆ. ಆದರೆ, ಇದಕ್ಕೆ ಕಡಿವಾಣ ಹಾಕುವುದು ಎತ್ತಮ ಏಕೆಂದರೆ ಈ ಸಮಯದಲ್ಲಿ ಬೀದಿ ಬದಿಯ ಆಹಾರವನ್ನು ತಿಂದರೆ ಫುಡ್ ಪಾಯಿಸನ್ನಂತಹ ತೊಂದರೆಗಳು ಕಂಡು ಬರುತ್ತದೆ. ಆದ್ದರಿಂದ ಇದಕ್ಕೆ ಬ್ರೇಕ್ ಹಾಕುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

ನಾನ್ವೇಜ್ ತಿನ್ನುವುದನ್ನು ಕಮ್ಮಿ ಮಾಡಿ. ತಿನ್ನುವುದಾದರೆ ತಾಜಾ ಮೀನು ಮತ್ತು ಮಾಂಸವನ್ನು ಮಿತವಾಗಿ ತಿನ್ನಿ. ಶೀತಲೀಕರಣ ಮಾಡಿದ ಆಹಾರಗಳನ್ನು ದೂರವಿಡಿ.

ಆಹಾರ ಉಳಿದರೆ ಫ್ರಿಜ್ನಲ್ಲಿ ಇಟ್ಟು ಮತ್ತೆ ತಿನ್ನುವಾಗ ಬಿಸಿ ಮಾಡಿ ತಿನ್ನಿ. ಹೂಕೋಸು, ಬಟಾಣಿ, ಬೆಂಡೆಕಾಯಿ, ಮೊಳಕೆ ಬರಿಸಿದ ಕಾಳುಗಳು , ಆಲೂಗಡ್ಡೆ ಇವುಗಳನ್ನು ಮಿತವಾಗಿ ಬಳಸಿ. ಈ ಆಹಾರ ಪದಾರ್ಥಗಳು ಅಜೀರ್ಣ ಸಮಸ್ಯೆಯನ್ನು ತರಬಹುದು.

ಮಳೆಗಾಲದಲ್ಲಿ ಆದಷ್ಟೂ ಮನೆಯನ್ನುಶುಚಿಯಾಗಿಡಿ, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಇದರೊಂದಿಗೆ ನಮ್ಮ ಆರೋಗ್ಯದ ರಕ್ಷಣೆಯನ್ನು ನಾವು ಮಾಡಿಕೊಳ್ಳೋಣ.

ಆಹಾರದ ಪೋಲು

[ಬದಲಾಯಿಸಿ]
  • ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಡಿ ತಯಾರಿಸಲಾದ ‘ಆಹಾರ ಪೋಲು ಸೂಚ್ಯಂಕ– 2021’ ರ ಪ್ರಕಾರ, 2019ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ. ಇದರಲ್ಲಿ ಮನೆಗಳಲ್ಲೇ ಶೇ 61ರಷ್ಟು ಆಹಾರ ಪೋಲು ಆಗಿದೆ. ಶೇ 26ರಷ್ಟು ಆಹಾರ ತಯಾರಿಕಾ ಉದ್ದಿಮೆಗಳಿಂದ ಹಾಗೂ ಶೇ 13ರಷ್ಟು ಇತರ ಕಡೆಗಳಿಂದ ಪೋಲಾಗಿದೆ. ಜಾಗತಿಕ ಮಟ್ಟದಲ್ಲಿ ಉತ್ಪಾದಿಸಲಾಗುವ ಒಟ್ಟು ಆಹಾರ ಪದಾರ್ಥಗಳಲ್ಲಿ ಶೇ 17ರಷ್ಟು ಪೋಲಾಗಿದೆ ಎಂದು ವರದಿ ಹೇಳಿದೆ.
  • ಪೋಲಾಗಿರುವ ಆಹಾರವನ್ನು ತಲಾ 40 ಟನ್‌ಗಳಂತೆ ಲಾರಿಗಳಲ್ಲಿ ತುಂಬಿ, ಒಂದರ ಹಿಂದೊಂದು ನಿಲ್ಲಿಸುತ್ತಾ ಹೋದರೆ, ಅವುಗಳ ಸಾಲು ಭೂಮಿಯನ್ನು 7 ಬಾರಿ ಸುತ್ತುವರಿಯುವಷ್ಟು ಉದ್ದವಾಗುತ್ತದೆ ಎಂದು ವರದಿ ಅಂದಾಜುಮಾಡಿದೆ. ಈ ಉದಾಹರಣೆಯು ಪೋಲಾಗುತ್ತಿರುವ ಆಹಾರದ ಅಗಾಧತೆಯನ್ನು ತಿಳಿಸುವುದು. ಬಡವ– ಶ್ರೀಮಂತ ಭೇದವಿಲ್ಲ: ತಲಾ ಆದಾಯದಲ್ಲಿ ಎಷ್ಟೇ ವ್ಯತ್ಯಾಸವಿರಲಿ ಆಹಾರ ಪೋಲಿನ ಪ್ರಮಾಣ ಎಲ್ಲಾ ರಾಷ್ಟ್ರಗಳಲ್ಲೂ ಬಹುತೇಕ ಒಂದೇ ಪ್ರಮಾಣದಲ್ಲಿದೆ. ಜಾಗತಿಕ ಮಟ್ಟದಲ್ಲಿ ತಲಾವಾರು ಆಹಾರ ಪೋಲು ಪ್ರಮಾಣ ವಾರ್ಷಿಕ 121ಕೆ.ಜಿ.ಯಷ್ಟಿದೆ. ಇದರಲ್ಲಿ 74 ಕೆ.ಜಿ.ಯಷ್ಟು ಮನೆಗಳಲ್ಲೇ ಪೋಲಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
  • 2019ರಲ್ಲಿ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ. ಕೋವಿಡ್‌–19 ಕಾರಣದಿಂದಾಗಿ ಮುಂದಿನ ವರ್ಷಗಳಲ್ಲಿ ಆ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಅಂದಾಜು ಇದೆ. 300 ಕೋಟಿ ಜನರಿಗೆ ಆರೋಗ್ಯಕರ ಆಹಾರ ಕೈಗೆಟುಕದಂತಾಗುವ ಸಾಧ್ಯತೆ ಇದೆ. ಆದ್ದರಿಂದ ಆಹಾರ ಪೋಲನ್ನು ನಿಯಂತ್ರಿಸುವ ಕಡೆಗೆ ಜಗತ್ತು ಗಮನ ಹರಿಸಬೇಕು ಎಂದು ವಿಶ್ವ ಸಂಸ್ಥೆಯ ವರದಿ ಉಲ್ಲೇಖಿಸಿದೆ.
  • 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಕೆಲವು ಗುರಿಗಳನ್ನು ನಿರ್ಧರಿಸಲಾಗಿದೆ. ಆ ಗುರಿಯನ್ನು ಸಾಧಿಸಬೇಕಾದರೆ ಆಹಾರ ಪೋಲು ಪ್ರಮಾಣದ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ. ಸರ್ಕಾರಗಳು ಇತ್ತ ಗಮನ ಹರಿಸಲೇ ಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.[]
  • ಆಹಾರ ಪೋಲು

ಉಲ್ಲೇಖ

[ಬದಲಾಯಿಸಿ]


"https://kn.wikipedia.org/w/index.php?title=ಆಹಾರ&oldid=1249476" ಇಂದ ಪಡೆಯಲ್ಪಟ್ಟಿದೆ








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: http://kn.wikipedia.org/wiki/%E0%B2%86%E0%B2%B9%E0%B2%BE%E0%B2%B0

Alternative Proxies:

Alternative Proxy

pFad Proxy

pFad v3 Proxy

pFad v4 Proxy