ವಿಷಯಕ್ಕೆ ಹೋಗು

ಆಂಟೇನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಆಂಟೇನಾ (antenna)ಅಥವಾ ಅಂಟೇನಾ ಎಂದರೆ ಬಾಹ್ಯಾಕಾಶದ ಮೂಲಕ ಪ್ರಸಾರವಾಗುವ ರೇಡಿಯೋ ತರಂಗಗಳು ಮತ್ತು ಲೋಹದ ವಾಹಕಗಳಲ್ಲಿ ಚಲಿಸುವ ವಿದ್ಯುತ್ ಪ್ರವಾಹಗಳ ನಡುವಿನ ಅಂತರಸಂಪರ್ಕವಾಗಿದೆ,[] ಇದನ್ನು ಟ್ರಾನ್ಸ್‌ಮಿಟರ್ ಅಥವಾ ರಿಸೀವರ್‌ನೊಂದಿಗೆ ಬಳಸಲಾಗುತ್ತದೆ. ರೇಡಿಯೋ ತರಂಗಗಳನ್ನು ಬಿತ್ತರಿಸಲು ಟ್ರಾನ್ಸ್ಮಿಟರ್ ಆಂಟೆನಾದ ತುದಿಗೆ ವಿದ್ಯುತ್ ಪ್ರವಾಹವನ್ನು ಪೂರೈಸಲಗುತ್ತದೆ ಮತ್ತು ಆಂಟೆನಾದಲ್ಲಿನ ವಿದ್ಯುತ್ ಪ್ರವಾಹದಿಂದ ವಿದ್ಯುತ್ಕಾಂತೀಯ ತರಂಗಗಳಾಗಿ (ರೇಡಿಯೋ ತರಂಗಗಳು) ಹೊರಹೊಮ್ಮುತ್ತದೆ.ರೇಡಿಯೋ ತರಂಗಗಳನ್ನು ಸ್ವೀಕರಿಸಲು ಆಂಟೆನಾವನ್ನು ರೀಸಿವರ್ಗೆ ಸಂಪರ್ಕಿಸಲಾಗುತ್ತದೆ, ರೇಡಿಯೋ ತರಂಗಗಳು ಆಂಟೇನಾಗೆ ಬಡಿದಾಗ ಅತ್ಯಲ್ಪ  ಪ್ರಮಾಣದ ವಿದ್ಯುತ್ ಪ್ರವಾಹ ಉತ್ಪದನೆಯಾಗುತ್ತದೆ, ಆಂಟೆನಾಗಳು ಎಲ್ಲಾ ರೇಡಿಯೊ ಉಪಕರಣಗಳ ಅಗತ್ಯ ಅಂಶಗಳಾಗಿವೆ.

ಆಂಟೆನಾ ಎನ್ನುವುದು ವಿದ್ಯುತ್ವಾಹಕಗಳ ಒಂದು ಶ್ರೇಣಿಯಾಗಿದ್ದು, ರಿಸೀವರ್ ಅಥವಾ ಟ್ರಾನ್ಸ್‌ಮಿಟರ್‌ಗೆ ವಿದ್ಯುತ್ ಸಂಪರ್ಕ ಹೊಂದಿರುತ್ತದೆ . ಆಂಟೆನಾಗಳನ್ನು ಎಲ್ಲಾ ಸಮತಲ ದಿಕ್ಕುಗಳಲ್ಲಿ ಸಮಾನವಾಗಿ (ಓಮ್ನಿಡೈರೆಕ್ಷನಲ್ ಆಂಟೆನಾಗಳು), ಅಥವಾ ಆದ್ಯತೆಯಾಗಿ ನಿರ್ದಿಷ್ಟ ದಿಕ್ಕಿನಲ್ಲಿ (ಡೈರೆಕ್ಷನಲ್ ಆಂಟೆನಾಗಳು) ಪ್ರಸಾರ ಮಾಡಲು ಮತ್ತು ಸ್ವೀಕರಿಸಲು ವಿನ್ಯಾಸಗೊಳಿಸಬಹುದು. ಆಂಟೆನಾವು ಟ್ರಾನ್ಸ್ಮಿಟರ್ಗೆ ಸಂಪರ್ಕ ಹೊಂದಿಲ್ಲದ ಅಂಶಗಳನ್ನು ಕೂಡ ಒಳಗೊಂಡಿರಬಹುದು ಉದಾಹರೆಣೆಗೆ ಪ್ಯಾರಾಬೋಲಿಕ್ ರಿಫ್ಲೆಕ್ಟರ್ಗಳು ರೆಸಿಸ್ಟರ್ಗಳು ಮತ್ತು ಕ್ಯಾಪಸಿಟರ್ಗಳು, ಇವು ರೇಡಿಯೊ ತರಂಗಗಳನ್ನು ಅಪೇಕ್ಷಿತ ವಿಕಿರಣ ಮಾದರಿಯಲ್ಲಿ ನಿರ್ದೇಶಿಸಲು ಸಹಾಯ ಮಾಡುತ್ತದೆ

ಈ ತಂತ್ರವನ್ನು ಮೊಟ್ಟಮೊದಲಿಗೆ, ರೆಡಿಯೋ ಟೆಲೆಗ್ರಾಫಿಯಲ್ಲಿ, ಮಾರ್ಕೊನಿಯವರು ಬಳಸಿದರು. ಸಮುದ್ರದಲ್ಲಿರುವ ಹಡಗುಗಳೊಂದಿಗೆ ಸಂಪರ್ಕ ಸಾಧಿಸಲು ರೆಡಿಯೋ ಟೆಲೆಗ್ರಾಫಿ ಬಳಸಲಾಗಿತ್ತು. ನಂತರ ಮಾನವನ ಧ್ವನಿಯನ್ನು ರೆಡಿಯೊ ತರಂಗಗಳ ಬಲಕೆಯಿಂದ ಪ್ರಸಾರ ಮಾಡಿದರು ಮಾರ್ಕೊನಿ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಆಂಟೇನಾ&oldid=1249338" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy