ವಿಷಯಕ್ಕೆ ಹೋಗು

ಚಿಪ್ಪುಹಂದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಪ್ಪುಹಂದಿ (ಇಂಗ್ಲಿಷ್': ಪಂಗೊಲಿನ್)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಕೆಳವರ್ಗ:
ಮೇಲ್ಗಣ:
ಗಣ:
Pholidota

Weber, 1904
ಕುಟುಂಬ:
Manidae

Gray, 1821
ಕುಲ:
Manis

Linnaeus, 1758
Species

Manis culionensis
Manis gigantea
Manis temminckii
Manis tricuspis
Manis tetradactyla
Manis crassicaudata
Manis pentadactyla
Manis javanica

ಚಿಪ್ಪುಹಂದಿ ಹಂದಿಯಲ್ಲಿ ಒಂದು ವಿಧ. ಇದರ ಮೈಮೇಲೆ ಚಿಪ್ಪು ಇರುವುದರಿಂದ ಇದನ್ನು ಚಿಪ್ಪುಹಂದಿ ಎಂದು ಕರೆಯುತ್ತಾರೆ.[]

ಪರಿಚಯ

[ಬದಲಾಯಿಸಿ]

ಚಿಪ್ಪು ಹಂದಿ ಒಂದು ಸಸ್ತನಿಯಾಗಿದೆ.ಇದನ್ನು ಆಂಗ್ಲ ಭಾಶೆಯಲ್ಲಿ ಪೆಂಗೋಲಿನ್ ಎನ್ನುತ್ತಾರೆ.ಇದರ ಗಾತ್ರ ಸುಮಾರು ೩೦ ರಿಂದ ೧೦೦ ಸೆ.ಮೀ ನವರೆಗೆ ಇರುತ್ತದೆ. ಇವುಗಳಲ್ಲಿ ಕೆಲವು ವರ್ಗಗಳು ಈಗಾಗಲೇ ನಾಶಹೊಂದಿವೆ. ಪೆಂಗೋಲಿನ್ ಎಂಬ ಹೆಸರು ಮಲಯ ಭಾಶೆಯ "ಪೆಂಗ್ಗುಲಿಂಗ್" ಎಂಬ ಪದದಿಂದ ಬಂದಿದೆ. ಇದು ಸಾಮಾನ್ಯವಾಗಿ ಉ‍ಶ್ಣವಲಯದ ದೇಶಗಳಾದ ಆಫ್ರಿಕಾ ಮತ್ತು ಏಶ್ಯಾದಲ್ಲಿ ಇವೆ. ಇವುಗಳಿಗೆ ತಮ್ಮ ಚರ್ಮದ ಮೇಲೆ ಅಗಲವಾದ ಚಿಪ್ಪುಗಳಿವೆ.ಇದು ಇವುಗಳ ಮಾತ್ರ ಪ್ರತ್ಯೇಕತೆಯಾಗಿದೆ.ಇವುಗಳು ಮರದ ಪೊತರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ.ಇವುಗಳು ಇರುವೆ ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ.ಇವುಗಳಗೆ ತಮ್ಮ ಆಹಾರವನ್ನು ಸೇವಿಸುವುದಕ್ಕಾಗಿ ಉದ್ದವಾದ ನಾಲಗೆಯಿದೆ.ಇವು ಒಮ್ಮೆಗೆ ೧ ರಿಂದ ೩ ಮರಿಗಳಿಗೆ ಜನ್ಮ ನೀದುತ್ತದೆ. ಅರಣ್ಯನಾಶದಿಂದಾಗಿ ಇವು ಈಗ ನಾಶದ ಅಂಚಿನಲ್ಲಿವೆ.

ಚಿಲ್ಟ್ರನ್ಸ್ ಮ್ಯೂಸಿಯಮ್ ಆಫ್ ಇಂಡಿಯಾನಅಪೋಲಿಸ್‌ನಲ್ಲಿರುವ ಚಿಪ್ಪು

ಚಿಪ್ಪುಹಂದಿಗಳು ಸಸ್ತನಿಗಳ ವರ್ಗಕ್ಕೆ ಸೇರಿವೆ . ಇವುಗಳ ವೈಜ್ಞಾನಿಕ ಹೆಸರು ಮನಿಸ್ ಒರಿಟ .

  • ದೇಹವು - ತಲೆ,ಕಾಂಡ ಮತ್ತು ಬಾಲ ಎಂದು ಪ್ರತ್ಯೇಕಿಸಬಹುದು.ದೇಹವು ಪ್ರಬಲ,ಮೊನಚಾದ ಹಾಗೂ ಅತಿಕ್ರಮಿಸುವ ಮಾಪಕಗಳಿಂದ ಒಳಗೊಂಡಿದೆ.ಈ ಅತಿಕ್ರಮಿಸುವ ಮಾಪಕಗಳು ಉದ್ದುದ್ದವಾದ ಸಾಲುಗಳಲ್ಲಿ ವ್ಯವಸ್ತಿತಗೊಂಡಿದೆ.(ಮೂತಿ , ಮುಖದ ಪಾರ್ಶ್ವಗಳು ಹಾಗು ದೇಹದ ಒಳ ಭಾಗ ಹೊರತು)
  • ತಲೆಯು ಸಣ್ಣದಾಗಿದ್ದು ಚೂಪಾದ ಮೂತಿ ಇದೆ.ಈ ಪ್ರಾಣಿಗಳಿಗೆ ಹಲ್ಲು ಇರುವುದಿಲ್ಲ.ಕಣ್ಣು ಹಾಗು ಪಿನ್ನೆ ಸಣ್ಣದಾಗಿದೆ.ನಾಲಗೆಯು ಗಮನಾರ್ಹವಾಗಿ ಉದ್ದ,ಜಿಗುಟಾಗಿದೆ.
  • ಇವುಗಳು ಗೆದ್ದಲು ಅಥವಾ ಬಿಳಿ ಇರುವೆಗಳನ್ನು ಆಹಾರವಾಗಿ ತಿನ್ನುತ್ತವೆ.
  • ಮಂಡಿಯು ಕೈ ಮತ್ತು ಕಾಲುಗಳನ್ನು ಒಳಗೊಂಡಿದೆ . ಕೈ ,ಕಾಲುಗಳಲ್ಲಿ ಬಲವಾದ ಬಾಗಿದ ಉಗುರುಗಳಿವೆ. ಮುಂದಿನ ಉಗುರುಗಳು ಬಿಲವನ್ನು ತೋಡಲು ಹಾಗು ಗೆದ್ದಲು ಗೂಡುಗಳನ್ನು ಹರಿದು ಹಾಕಲು ಉಪಯೊಗಿಸುತ್ತವೆ.
  • ಬಾಲವು ಉದ್ದವಾಗಿದೆ.
  • ಈ ಪ್ರಾಣಿಗಳ ಮೇಲೆ ದಾಳಿ ನಡೆಸಿದಾಗ ಅವುಗಳು ಚೆಂಡುವಿನ ಆಕಾರ ತಾಳಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.

ಆವಾಸಸ್ಥಾನ

[ಬದಲಾಯಿಸಿ]

"ಮನಿಸ್ ಒರಿಟ"ವನ್ನು ಸಾಮಾನ್ಯವಾಗಿ 'ಚಿಪ್ಪುಗಳುಳ್ಳ ಇರುವೆಭಕ್ಷರು'ಅಥವಾ'ಚಿಪ್ಪುಹಂದಿ' ಎಂದು ಕರೆಯಲಾಗುತ್ತದೆ.ಇವುಗಳು ಬಿಲಗಳಲ್ಲಿ ಹಾಗು ಮರಗಳಲ್ಲಿ ಕಾಣಸಿಗುತ್ತವೆ.

ಉಲ್ಲೇಖ

[ಬದಲಾಯಿಸಿ]
  1. http://savepangolins.org/
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy