ವಿಷಯಕ್ಕೆ ಹೋಗು

ಪ್ಲಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ಲಮ್ ಪ್ರೂನಸ್ ಜಾತಿಯ ಉಪಜಾತಿ ಪ್ರೂನಸ್‍ನ ಒಂದು ಹಣ್ಣು. ಈ ಉಪಜಾತಿಯು ಇತರ ಉಪಜಾತಿಗಳಿಂದ (ಪೀಚ್‍ಗಳು, ಚೆರಿಗಳು, ಬರ್ಡ್ ಚೆರಿಗಳು, ಇತ್ಯಾದಿ) ಕುಡಿಗಳು ಒಂದು ಅಂತ್ಯ ಮೊಗ್ಗು ಹಾಗೂ ಏಕಾಂಗಿ ಪಾರ್ಶ್ವ ಮೊಗ್ಗುಗಳನ್ನು (ಗೊಂಚಲುಗೊಂಚಲಾಗಿರದೆ) ಹೊಂದಿ, ಹೂವುಗಳು ಗಿಡ್ಡನೆಯ ಕಾಂಡಗಳ ಮೇಲೆ ಒಂದರಿಂದ ಐದರ ಗುಂಪುಗಳಲ್ಲಿ ಒಟ್ಟಿಗೆ ಇದ್ದು, ಮತ್ತು ಹಣ್ಣು ಒಂದು ಪಾರ್ಶ್ವದಲ್ಲಿ ಹಾದು ಕೆಳಗೆ ಹೋಗುವ ಒಂದು ತೋಡು ಹಾಗೂ ನಯವಾದ ಗೊರಟೆಯನ್ನು ಹೊಂದಿ ಭಿನ್ನವಾಗಿದೆ. ಪಕ್ವ ಪ್ಲಮ್ ಹಣ್ಣು ಅದಕ್ಕೆ ಮಾಸಲು ಬೂದು ಹಸಿರು ರೂಪವನ್ನು ಕೊಡುವ ಬೂದು-ಬಿಳಿ ಲೇಪವನ್ನು ಹೊಂದಿರಬಹುದು. ಪ್ಲಮ್ ಹಣ್ಣು ಆರೋಗ್ಯಕರ ಗುಣಗಳಿಂದಲೇ ಹೆಸರು ಪಡೆದಿದೆ. ಆದರೆ ದುಬಾರಿ. ಈ ಹಣ್ಣಿನಲ್ಲಿರುವ ಪೋಷಕಾಂಶಗಳ ವಿವರ ಕೆಳಗಿದೆ.

ಪ್ಲಮ್‌ ಹಣ್ಣಿನ ಸೇವನೆಯ ಉಪಯೋಗಗಳು

[ಬದಲಾಯಿಸಿ]
  • ಪ್ಲಮ್‌ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅತ್ಯವಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್ ಅಂಶಗಳು ಹೇರಳವಾಗಿವೆ.
  • ಪ್ಲಮ್ ಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
  • ಮಲಬದ್ಧತೆ ತಡೆಯುವಲ್ಲಿ ಇದು ಸಹಕರಿಸುತ್ತದೆ.
  • ಜೀವಕೋಶಗಳು ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ.
  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ದೇಹವು ಕಬ್ಬಿಣಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ.
  • ಕ್ಯಾಲೊರಿ ಕಡಿಮೆ ಇರುತ್ತದೆ.
  • ಲ್ಯೂಟೀನ್‌, ಝಿಕ್ಸಾಂತಿನ್ ಹೆಚ್ಚಿರುವುದರಿಂದ ನರಸಂಬಂಧಿ ಸಮಸ್ಯೆಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಲ್ಲದು.
  • ಪ್ಲಮ್‌ ಹಣ್ಣಿನಲ್ಲಿನ ನಿಯಾಸಿನ್, ವಿಟಮಿನ್ ಬಿ6, ಪ್ಯಾಂಟೊಥೆನಿಕ್, ಆ್ಯಸಿಡ್ ಅಂಶಗಳು ಮರೆಗುಳಿತನ (ಅಲ್ಜಮೈರ್) ಸಾಧ್ಯತೆಯನ್ನು ತಪ್ಪಿಸಬಹುದು.
  • ಮುಪ್ಪಿನ ಲಕ್ಷಣಗಳನ್ನು ಕುಗ್ಗಿಸುತ್ತದೆ.
  • ಒಂದು ಸಾಮಾನ್ಯ ಗಾತ್ರದ ಪ್ಲಮ್ ಹಣ್ಣಿನಲ್ಲಿ 113 ಮಿ.ಗ್ರಾಂ ಪೊಟಾಷಿಯಂ ಅಂಶವಿದ್ದು, ಅದು ರಕ್ತದ ಏರೊತ್ತಡವನ್ನು ಕಡಿಮೆ ಮಾಡುವುದಲ್ಲದೆ, ಪಾರ್ಶ್ವವಾಯು ಸಾಧ್ಯತೆಯನ್ನು ತಗ್ಗಿಸುತ್ತದೆ.
  • ಪ್ಲಮ್‌ನಲ್ಲಿನ ಕೆಂಪು ನೀಲಿ ಪಿಗ್ಮೆಂಟ್‌ಗಳು– ಆ್ಯಂಥೊಸಿಯಾನಿನ್‌ಗಳು ಕ್ಯಾನ್ಸರ್‌ಕಾರಕ ಅಂಶಗಳನ್ನು ದೂರವಿರಿಸುತ್ತದೆ.

ಸಾರ ಸತ್ವ

[ಬದಲಾಯಿಸಿ]
ಪೋಷಕಾಂಶ ಪ್ರಮಾಣ ವಿಟಮಿನ್‍ಗಳು ಪ್ರಮಾಣ ಖನಿಜಾಂಶ ಪ್ರಮಾಣ
ಕಾರ್ಬೋಹೈಡ್ರೇಟ್ 11.42 ವಿತಾಮಿನ್ ಎ 2% ಕ್ಯಾಲ್ಸಿಯಂ 1%
ಶಕ್ತಿ 46 ಕಿ.ಕ್ಯಾಲರಿ ಬೀಟಾ ಕೆರೊಟಿನ್ 2% ಕಬ್ಬಿಣ 1 %
ಕೊಬ್ಬು 0.28ಗ್ರಾಂ ರಿಥಯಾಮಿನ್ ವಿ-ಬಿ 1 2% ಮೆಗ್ನಿಸಿಯಂ 2 %
ಪ್ರೋಟೀನು 0.7ಗ್ರಾಂ. ರಿಬೊಫ್ಲವಿನ್ ಬಿ 2 2% ಮ್ಯಾಂಗನೀಸು 2%
ನಾರಿನ ಅಂಶ 1.4ಗ್ರಾಂ. ನಿಯಾಸಿನ್ï ಬಿ 3 3% ಫಾಸ್ಪರಸ್ 2 %
ಸಕ್ಕರೆ 9.92 ಗ್ರಾಂ ಪ್ಯಾಂಟೊಥೆನಿಕ್ ಆಸಿಡ್ ಬಿ 5 3% ಪೊಟ್ಯಾಸಿಯಂ 3 %
ವಿಟಾಮಿನ್ ಬಿ 6 2% ಜಿಂಕ್ 1 %
ಪೊಲೆಟ್ ಬಿ 9 1 % ಪೋಷಕಾಂಶ
ವಿಟಮಿನ್ ಸಿ 11% ಕ್ಯಾಲ್ಸಿಯಂ
ವಿಟಮಿನ್ ಇ 2 %
ವಿಟಾಮಿನ್ ಕೆ 6 %

[]

ಪ್ಲಮ್‌ ಬೇರೆ ಬೇರೆ ದೇಶಗಳಲ್ಲಿ

[ಬದಲಾಯಿಸಿ]
  • ಪ್ಲಮ್ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಿಂಗಳಿನಲ್ಲಿ ಫಲ ಕೊಡುತ್ತದೆ. ಉದಾಹರಣೆಗೆ, ಜನವರಿಯಲ್ಲಿ ಥೈವಾನ್‌ನಲ್ಲಿ ಬಿಟ್ಟರೆ, ಅಮೆರಿಕದಲ್ಲಿ ಏಪ್ರಿಲ್‌ನಲ್ಲಿ ಬಿಡುತ್ತದೆ.
  • ಪ್ಲಮ್‌ ಹಣ್ಣಿಗೆ ನೈಸರ್ಗಿಕವಾಗಿಯೇ ಮೇಣದಂಥ ಹೊದಿಕೆ ಇರುವುದು ಇದರ ತಾಜಾತನ ದೀರ್ಘವಾಗಿ ಉಳಿಯಲು ಕಾರಣ. ಪ್ಲಮ್‌ನಲ್ಲಿ ಸುಮಾರು 40 ಪ್ರಬೇಧಗಳಿವೆ. ಇದರಲ್ಲಿ ಎರಡು ಪ್ರಬೇಧಗಳು ವಾಣಿಜ್ಯಿಕವಾಗಿ ಹೆಚ್ಚು ಹೆಸರು ಗಳಿಸಿಕೊಂಡಿವೆ. ಯುರೋಪಿನ್ ಪ್ಲಮ್ (ಪ್ರೂನಸ್ ಡೊಮೆಸ್ಟಿಕ) ಜಪಾನಿಸ್ ಪ್ಲಮ್ (ಪ್ರೂನಸ್ ಸ್ಯಾಲಿಸಿನ ಅಂಡ್ ಹೈಬ್ರಿಡ್) ಇವುಗಳ ಹೆಸರು. ಇನ್ನಿತರ ಪ್ರಬೇಧಗಳು ಯುರೋಪ್, ಏಷ್ಯಾ ಹಾಗೂ ಅಮೆರಿಕಗಳಲ್ಲಿ ಬೆಳೆಯುತ್ತವೆ. ಜಾಮ್ ತಯಾರಿಕೆಯಲ್ಲಿ ಪ್ಲಮ್‌ ಹಣ್ಣನ್ನು ಹೆಚ್ಚು ಬಳಸುತ್ತಾರೆ. ಇದರಿಂದ ಪ್ಲಮ್ ವೈನ್ ತಯಾರಿಯೂ ಆಗುತ್ತದೆ. ಇಂಗ್ಲೆಂಡ್‌ನಲ್ಲಿ ಪ್ಲಮ್ ಜರ್ಕಮ್ ಎಂಬ ಮದ್ಯವೂ ಇದೆ. ಪ್ಲಮ್ ಹಣ್ಣನ್ನು ಒಣಗಿಸಿ ಮಾರುವ ಪರಿಪಾಠವೂ ಹುಟ್ಟಿಕೊಂಡಿದೆ. ಹಳದಿ, ಬಿಳಿ, ಹಸಿರು ಹಾಗೂ ಗಾಢ ಕೆಂಪು ಬಣ್ಣದಲ್ಲಿ ಪ್ಲಮ್‌ ಇರುತ್ತದೆ.
  • [ಪ್ಲಮ್‌ ಮರವನ್ನು ಸಂಗೀತ ಸಾಧನಗಳ ತಯಾರಿಕೆಗೂ ಬಳಸುತ್ತಾರೆ.

ಪ್ಲಮ್ ಬೆಳೆಯುವ ಪ್ರಮುಖ ದೇಶಗಳು 2015

[ಬದಲಾಯಿಸಿ]
  • ದಶ ಲಕ್ಷ ಮೆಟ್ರಿಕ್ ಟನ್ಗಳಲ್ಲಿ
ಸ್ಥಾನ ದೇಶ ಉತ್ಪಾದನೆ (ದಶಲಕ್ಷಟನ‌ಗಳಲ್ಲಿ)
1 ಚೀನಾ 6,100,000
2 ಭಾರತ 738,345
3 ಸರ್ಬಿಯಾ 512,645
4 ರೊಮಾನಿಯಾ 306,967
5 ಚಿಲಿ 305,556
6 ಟರ್ಕಿ 305,108
7 ಇರಾನ್ 226,956
8 ಬೋಸ್ನಿಯಾ ಮತ್ತು ಹರ್ಜೆಗೊವೊನಾ 220,000
9 ಇಟಲಿ 210,564
10 ಅಮೇರಿಕ 210,001
ಒಟ್ಟು ವಿಶ್ವದಲ್ಲಿ 11,528,337

[]

ಸೇಬು ದ್ರಾಕ್ಷಿ

ಉಲ್ಲೇಖ

[ಬದಲಾಯಿಸಿ]
  1. Plums nutrition facts
  2. "ಪ್ಲಮ್‌ ಹಣ್ಣಿನ ಫಲಗಳು". Archived from the original on 2016-11-01. Retrieved 2016-11-02.


"https://kn.wikipedia.org/w/index.php?title=ಪ್ಲಮ್&oldid=1251409" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy