ವಿಷಯಕ್ಕೆ ಹೋಗು

ಮಲೆನಾಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಲೆನಾಡು
ಮಲ್ನಾಡ್
Forests of Malenadu
Forests of Malenadu
Malenadu region shown in Green
Malenadu region shown in Green
ದೇಶಭಾರತ
ರಾಜ್ಯಕರ್ನಾಟಕ
ಪ್ರದೇಶಮಲೆನಾಡು
ತಾಲೂಕುಖಾನಾಪುರ
ಸಿರ್ಸಿ
ಜೊಯಿಡಾ
ದಾಂಡೇಲಿ
ಹಳಿಯಾಳ
ಯಲ್ಲಾಪುರ
ಮುಂಡಗೋಡ
ಸಿದ್ದಾಪುರ
ಸಾಗರ
ಹೊಸನಗರ
ಶಿವಮೊಗ್ಗ
ತೀರ್ಥಹಳ್ಳಿ
ಚಿಕ್ಕಮಗಳೂರು
ಶೃಂಗೇರಿ
ಕೊಪ್ಪ
ನರಸಿಂಹರಾಜಪುರ
ಮೂಡಿಗೆರೆ
ಸಕಲೇಶಪುರ
ಸೋಮವಾರಪೇಟೆ
ಮಡಿಕೇರಿ
ವಿರಾಜಪೇಟೆ
ಸುಳ್ಯ
ಭಾಷೆ
 • ಅಧಿಕೃತಕನ್ನಡ
 • ಪ್ರಾದೇಶಿಕತುಳು, ಸಿರ್ಸಿ ಕನ್ನಡ
ಹವಿಗನ್ನಡ
ಕೊಡವ
Time zoneUTC+5:30

ಕರ್ನಾಟಕದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ.[] ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ.[] [] ಶಿವಮೊಗ್ಗ ವನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯುತ್ತಾರೆ.[][][] ಈ ಪ್ರದೇಶದ ಜನರು ಪ್ರಕೃತಿಯನ್ನು ಆರಾಧಿಸುತ್ತಾ, ಹಿಂದುತ್ವವನ್ನು ಅಳವಡಿಸಿಕೊಂಡಿದ್ದಾರೆ.

ಚಿತ್ರಸಂಪುಟ

[ಬದಲಾಯಿಸಿ]

ಮಲೆನಾಡ ತಿನಿಸುಗಳು

[ಬದಲಾಯಿಸಿ]

ಕರಿಮೀನು ಚಟ್ನಿ: ಮಳೆಗಾಲ ಶುರುವಾಗಿ ಜಮೀನಿನ ನೀರು ಹಳ್ಳಕ್ಕೆ ಬಿದ್ದು ಹಳ್ಳದ ನೀರು ಹೊಳೆಗೆ ಸೇರಲು ಶುರುವಾದಾಗ ಹೊಳೆಯಲ್ಲಿರುವ ಮೀನುಗಳು ನೀರಿನ ವಿರುದ್ದ ದಿಕ್ಕಿಗೆ ಈಜುತ್ತಾ ಹೊಳೆಯಿಂದ ಹಳ್ಳಕ್ಕೆ, ಹಳ್ಳದಿಂದ ಜಮೀನಿಗೆ ಮೊಟ್ಟೆ ಇಡಲು ಬಂದು ಸೇರುತ್ತವೆ. ಒಂದೆರಡು ದಿನ ಜೋರು ಮಳೆಯಾದಾಗ ಮಲೆನಾಡಿಗರು ನೀರು ಬೀಳುವ ಜಾಗಗಳಲ್ಲಿ ಇರುಳಿನ ಹೊತ್ತು ಕಾದು ಕುಳಿತು ಈ ರೀತಿ ಬಂದು ಸೇರುವ ಮೀನುಗಳನ್ನು ಬೇಟೆಯಾಡುತ್ತಾರೆ, ಇವುಗಳಿಗೆ ಹತ್ಮೀನು(ಹತ್ತುವ ಮೀನು) ಎಂದು ಕರೆಯುತ್ತಾರೆ.

ಇನ್ನೂ ನಾಟಿಯಾದ ಮೇಲೆ ಬತ್ತದ ಸಸಿಗಳು ಒಂದು ಅಡಿ ಎತ್ತರಕ್ಕೆ ಬೆಳೆದಿರುವಾಗ ಬಂದು ಸೇರುವ ಮೀನುಗಳು ನೀರು ತುಂಬಿದ ಗದ್ದೆಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿರುತ್ತವೆ. ಮೂರು ನಾಲ್ಕು ತಿಂಗಳಲ್ಲಿ ಗದ್ದೆಗಳಲ್ಲಿ ಬೆಳೆದು ಸ್ವಲ್ಪ ದಪ್ಪನಾಗುತ್ತವೆ. ಅವು ಮಳೆಗಾಲ ಕಡಿಮೆಯಾಗುವ ಕಾಲ ಅಂದರೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ವಾಪಸು ಹಳ್ಳ ಸೇರಿ ಹೊಳೆಗೆ ಹೋಗುತ್ತವೆ. ಈ ಕಾಲದಲ್ಲಿ ಅವರವರ ಗದ್ದೆಗಳಲ್ಲಿ ಮೀನು ಹಿಡಿಯಲು ಎಲ್ಲಾ ಬಾಗದ ನೀರು ಒಂದೆಡೆಯಿಂದ ಹೊರಹೋಗಲು ಒಂದು ಕಡುವೆ ಮಾಡಿ ಅದಕ್ಕೆ ಒಂದು ಕೂಣಿ(ಮೀನು/ಏಡಿ ಹಿಡಿಯಲು ಬಳಸುವ ಸಾದನ)ವನ್ನು ಇಡುತ್ತಾರೆ. ಆ ಸಮಯದಲ್ಲಿ ಸ್ವಲ್ಪ ಮಳೆ ಬಂದು ನೀರು ಕಡುವೆಯ ಮುಕಾಂತರ ಕೂಣಿಗೆ ಬೀಳುತ್ತದೆ. ಆಗ ರಾಶಿ ರಾಶಿ ಮೀನುಗಳು ಕೂಣಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಇವು ಸಣ್ಣ ಮೀನುಗಳು ಇವುಗಳನ್ನು ಒಣಗಿಸುತ್ತಾರೆ. ಬಿಸಿಲಿದ್ದರೆ ಬಿಸಿಲಿನಲ್ಲಿ, ಇಲ್ಲದಿದ್ದರೆ 3-4 ಅಡಿಗಳಶ್ಟು ಎತ್ತರಕ್ಕೆ ಅಡಿಕೆ ಒಣಗಿಸುವ ತಟ್ಟಿಯಲ್ಲಿ ಮೀನುಗಳನ್ನು ಹರಡಿ, ಅಡಿಗಡೆಯಿಂದ ಬೆಂಕಿಯ ಶಾಕದಿಂದ ಒಣಗಿಸುತ್ತಾರೆ. ಹೀಗೆ ಹೊಗೆಯಲ್ಲಿ ಒಣಗುವುದರಿಂದ ಮೀನುಗಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಹಾಗಾಗಿ ಇದಕ್ಕೆ ಕರಿಮೀನು ಎಂದು ಹೆಸರು!

ಒಣಗಿಸಿದ ಕರಿಮೀನುಗಳನ್ನು ಮಣ್ಣಿನ ಗಡಿಗೆಗಳಿಗೆ ತುಂಬಿಸುತ್ತಾರೆ. ಗಡಿಗೆಗೆ ತುಂಬಿಸುವಾಗ ಸ್ವಲ್ಪ ಬಿಳೆಹುಳ್ಳನ್ನು ಸಣ್ಣಗೆ ಕತ್ತರಿಸಿ ಅದರ ಜೊತೆ ಸೇರಿಸಿ ತುಂಬಿಡುತ್ತಾರೆ. ಬಿಳೆಹುಲ್ಲು ಅದನ್ನು ಶಾಕವಾಗಿಡುತ್ತೆ. ಉಪಯೋಗಿಸಲು ಬೇಕಾದಾಗ ಎಶ್ಟು ಬೇಕೋ ಅಶ್ಟು ಮೀನನ್ನು ಆರಿಸಿ ತೆಗೆದು ಚೆನ್ನಾಗಿ ತೊಳೆದು ಹುಳಿ, ಉಪ್ಪು, ಕಾರ, ಸಾಂಬಾರು ಪದಾರ್ತ ಸೇರಿಸಿ ಎಣ್ಣೆಯಲ್ಲಿ ಒಗ್ಗರಣೆ ಹಾಕಿ ಬೇಯಿಸುತ್ತಾರೆ. ಇದನ್ನೇ ಕರಿಮೀನು ಚಟ್ನಿ ಎನ್ನುತ್ತಾರೆ. ರುಚಿಯಾಗೂ ಇರುತ್ತೆ!

ಉಲ್ಲೇಖಗಳು

[ಬದಲಾಯಿಸಿ]
  1. http://www.kamat.com/kalranga/kar/malenadu.htm
  2. "ಆರ್ಕೈವ್ ನಕಲು". Archived from the original on 2009-04-09. Retrieved 2016-11-01.
  3. http://whc.unesco.org/en/list/1342
  4. ಮಲೆನಾಡಿನ ಹೆಬ್ಬಾಗಿಲು ಸಿರ್ಸಿ | ವಿಜಯ ಕರ್ನಾಟಕ
  5. ಸಿರ್ಸಿ ಮಲೆನಾಡಿನ ಹೆಬ್ಬಾಗಿಲು | News 18 ಕನ್ನಡ
  6. ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು | ಟಿವಿ9 ಕನ್ನಡ


"https://kn.wikipedia.org/w/index.php?title=ಮಲೆನಾಡು&oldid=1178361" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy