ವಿಷಯಕ್ಕೆ ಹೋಗು

ಹೆಸರಘಟ್ಟ ಕೆರೆ

Coordinates: 13°09′N 77°29′E / 13.15°N 77.49°E / 13.15; 77.49
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hesaraghatta Lake
View of Lake in 2006
ಸ್ಥಳಬೆಂಗಳೂರು, ಕರ್ನಾಟಕ
ನಿರ್ದೇಶಾಂಕಗಳು13°09′N 77°29′E / 13.15°N 77.49°E / 13.15; 77.49
Freshwater lake
ಒಳಹರಿವುಅರ್ಕಾವತಿ ನದಿ
ಕ್ಯಾಚ್ಮೆಂಟ್ ಪ್ರದೇಶ73.83 km2 (28.51 sq mi)
Basin countriesಭಾರತ
4.50 km2 (1,110 acres)
ಗರಿಷ್ಠ ಆಳ27.44 m (90.0 ft)
ನೀರಿನ ಪ್ರಮಾಣ28,240,000 m3 (997,000,000 cu ft)
ಮೇಲ್ಮೈ ಎತ್ತರ861 m (2,825 ft)
ವಸಾಹತುಗಳುಬೆಂಗಳೂರು,ಕೆಎ -52

ಬೆಂಗಳೂರಿನ ಉತ್ತರದಲ್ಲಿ ೨೭ಕಿಮಿ ದೂರದಲ್ಲಿ ಹೆಸರುಘಟ್ಟ ಕೆರೆ ಇದೆ, ಈ ಕೆರೆಯು ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು.

ಇತಿಹಾಸ

[ಬದಲಾಯಿಸಿ]

ಕ್ರಿ.ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು ಎನ್ನಲಾಗುತ್ತದೆ. ಅರ್ಕಾವತಿ ನದಿಯ ನೀರೇ ಕೆರೆಗೆ ಜಲಮೂಲ. ನೂರಾರು ವರ್ಷಗಳ ಕಾಲ ಈ ಕೆರೆಯ ನೀರೇ ನೀರಾವರಿಗೂ ಮೂಲ. ಮುಂದೆ ೧೯ನೇ ಶತಮಾನದ ಅಂತ್ಯಕ್ಕೆ ಬೆಂಗಳೂರು ಬೆಳೆಯಲಾರಂಭಿಸಿತು. ಆಗ ನಗರಕ್ಕೆ ನೀರುಣಿಸುತ್ತಿದ್ದುದು ಧರ್ಮಾಂಬುಧಿ, ಸಂಪಂಗಿ, ಅಲಸೂರು, ಸ್ಯಾಂಕಿ ಕೆರೆಗಳು. ಆದರೆ, ವೇಗವಾಗಿ ಬೆಳೆಯುತ್ತಿದ್ದ ಬೆಂಗಳೂರಿನ ಒಡಲಿಗೆ ಈ ಕೆರೆಗಳ ನೀರು ಸಾಕಾಗಲಿಲ್ಲ. ಹೀಗಾಗಿ, ಆಗಿನ ದಿವಾನ್ ಕೆ. ಶೇಷಾದ್ರಿ ಅಯ್ಯರ್‌ 1894ರಲ್ಲಿ ಹೆಸರಘಟ್ಟ ಕೆರೆಯಿಂದ ನೀರುಣಿಸುವ ಯೋಜನೆ ರೂಪಿಸಿದರು. ಆಗಿನ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಎಂ.ಸಿ. ಹಚಿನ್ಸನ್ ತಾಂತ್ರಿಕ ನೆರವು ನೀಡಿದರು. ಕೇವಲ ಎರಡೇ ವರ್ಷಗಳಲ್ಲಿ, ಅಂದರೆ, 1896 ಆಗಸ್ಟ್ ತಿಂಗಳ 7ನೇ ತಾರೀಖಿನಂದು ಹೆಸರಘಟ್ಟ ಯೋಜನೆ ಸಿದ್ಧವಾಯಿತು. ಬೆಂಗಳೂರಿನ ಆಗಿನ ಜನಸಂಖ್ಯೆ ಕೇವಲ ಎರಡು ಲಕ್ಷ ಐವತ್ತು ಸಾವಿರ. ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರಿನಂತೆ ಸತತ 37 ವರ್ಷ ಕಾಲ ನೀರುಣಿಸಿದ ಹಿರಿಮೆ ಈ ಕೆರೆಯದು.

ಬೆಂಗಳೂರಿಗೆ ನೀರು ಹರಿಯುತ್ತಿತ್ತು

[ಬದಲಾಯಿಸಿ]

ಬೆಂಗಳೂರಿಗೆ ಹಿಂದೆ ನೀರುಣಿಸುತ್ತಿದ್ದುದು ಧರ್ಮಾಂಬುಧಿ, ಸಂಪಂಗಿ,ಹಲಸೂರು ಮತ್ತು ಸ್ಯಾಂಕಿ ಕೆರೆ. ಆದರೆ, ವೇಗವಾಗಿ ಬೆಳೆಯುತ್ತಿದ್ದ ನಗರಕ್ಕೆ ಈ ನೀರು ಸಾಕಾಗಲಿಲ್ಲ. ಹೀಗಾಗಿ ದಿವಾನ್ ಕೆ.ಶೇಷಾದ್ರಿ ಅಯ್ಯರ್ 1894ರಲ್ಲಿ ಹೆಸರಘಟ್ಟ ಕೆರೆಯಿಂದ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿದರು. 1896ರಿಂದ ಹೆಸರಘಟ್ಟ ಯೋಜನೆ ಚಾಲನೆಗೊಂಡಿತು. ಇಟ್ಟಿಗೆಗಳಿಂದ ನಿರ್ಮಿಸಿದ ಕಾಲುವೆ ಮೂಲಕ ಹೆಸರಘಟ್ಟ ಕೆರೆ ನೀರು ತರಬನಹಳ್ಳಿಗೆ ಬರುತ್ತಿತ್ತು. ಅಲ್ಲಿ ನೀರನ್ನು ಶೋಧಿಸಿ, ಕ್ಲೋರಿನ್ ಬೆರೆಸಿ, ಸೋಲ ದೇವನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿಂದ ಬೆಂಗಳೂರಿಗೆ ನೀರು ಹರಿಯುತ್ತಿತ್ತು. 1924ರಿಂದ ಸತತ ಮೂರು ವರ್ಷ ಮಳೆ ಆಗದೆ, ಹೆಸರಘಟ್ಟ ಕೆರೆಯಲ್ಲಿ ನೀರು ಕಡಿಮೆಯಾಯಿತು. ಹೀಗಾಗಿ,ಪರ್ಯಾಯ ಜಲಮೂಲಗಳನ್ನು ಶೋಧಿಸಬೇಕಾಯಿತು. ಆಡಳಿತಗಾರರು ತಿಪ್ಪಗೊಂಡನಹಳ್ಳಿ ಕೊಳ್ಳ ಯೋಜನೆ ರೂಪಿಸಿದರು. ಮುಂದೆ ಅದೂ ಸಾಲದೆ, ಕಾವೇರಿ ಯೋಜನೆ ರೂಪು ಗೊಂಡಿತು. ನಿರ್ಲಕ್ಷಿತ ಹೆಸರಘಟ್ಟ ಕೆರ ಅವನತಿಯತ್ತ ಸಾಗತೊಡಗಿತು. ಒತ್ತುವರಿ ಹಾಗೂ ಜಲಾನಯನ ಪ್ರದೇಶದಲ್ಲಿ ಕಷಿ ಹಾಗೂ ಕೈಗಾರಿಕೆ ಚಟುವಟಿಕೆಗಳಿಂದ ಮಳೆ ನೀರು ಕೆರೆಗೆ ಹರಿದು ಬರುವ ಮಾರ್ಗ ಕುಗ್ಗುತ್ತ ಬಂದಿತು.

ವೀಳ್ಯದೆಲೆಯ ತಾಣ

[ಬದಲಾಯಿಸಿ]

ಹೆಸರಘಟ್ಟ ಕೆರೆ ಶತಮಾನಗಳ ಕಾಲ ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕಿನ ಸಾವಿರಾರು ಎಕರೆ ಕಷಿ ಭೂಮಿಗೆ ನೀರುಣಿಸಿತ್ತು, ಬೆಂಗಳೂರಿಗರ ದಾಹ ತಣಿಸಿತ್ತು. ಜತೆಗೆ, ರಸವತ್ತಾದ ವೀಳ್ಯದೆಲೆ ಕೃಷಿಗೆ ಬೆಂಬಲವಾಗಿತ್ತು ಮೀನುಗಳು ನೂರಾರು ವರ್ಷ ಜನರ ಹೊಟ್ಟೆ ತುಂಬಿಸಿವೆ. ಹೈನುಗಾರಿಕೆ, ಮೀನುಗಾರಿಕೆ,ಕೃಷಿ, ತೋಟಗಾರಿಕೆಗೆ ಇಂಬು ನೀಡಿದೆ.

ಉಲ್ಲೇಖಗಳು

[ಬದಲಾಯಿಸಿ]

[] [] []

pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy