Content-Length: 83938 | pFad | http://kn.wikipedia.org/w/index.php?title=%E0%B2%95%E0%B2%BF%E0%B2%B0%E0%B2%BE%E0%B2%A3%E0%B2%BF_%E0%B2%85%E0%B2%82%E0%B2%97%E0%B2%A1%E0%B2%BF&printable=yes

ಕಿರಾಣಿ ಅಂಗಡಿ - ವಿಕಿಪೀಡಿಯ ವಿಷಯಕ್ಕೆ ಹೋಗು

ಕಿರಾಣಿ ಅಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿರಾಣಿ ಅಂಗಡಿ

ಕಿರಾಣಿ ಅಂಗಡಿಯು ಮುಖ್ಯವಾಗಿ ಆಹಾರವನ್ನು ಮಾರಾಟಮಾಡುವ ಒಂದು ಚಿಲ್ಲರೆ ಅಂಗಡಿ. ಕಿರಾಣಿ ವ್ಯಾಪಾರಿಯು ಆಹಾರದ ಸಗಟು ಮಾರಾಟಗಾರ. ಕಿರಾಣಿ ಅಂಗಡಿಗಳು ಬಾಟಲಿಗಳು, ಪೆಟ್ಟಿಗೆಗಳು ಮತ್ತು ತವರದ ಡಬ್ಬಿಗಳಲ್ಲಿ ಪ್ಯಾಕ್ ಮಾಡಿದ ಬೇಗ ಕೆಡದ ಆಹಾರಗಳನ್ನು ಕೂಡ ಮಾರುತ್ತವೆ; ಕೆಲವು ಅಂಗಡಿಗಳು ಬೇಕರಿಗಳು, ಕಸಾಯಿಗಳು, ರಸಭಕ್ಷ್ಯದ ವಿಭಾಗಗಳು ಮತ್ತು ತಾಜಾ ಉತ್ಪನ್ನಗಳನ್ನು ಕೂಡ ಹೊಂದಿರುತ್ತವೆ. ಗಣನೀಯ ಪ್ರಮಾಣದಲ್ಲಿ ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳಂತಹ ಆಹಾರೇತರ ಉತ್ಪನ್ನಗಳನ್ನು ಸಂಗ್ರಹ ಮಾಡುವ ದೊಡ್ಡ ಕಿರಾಣಿ ಅಂಗಡಿಗಳನ್ನು ಮಹಾಮಳಿಗೆಗಳು ಎಂದು ಕರೆಯಲಾಗುತ್ತದೆ. ಕೆಲವು ದೊಡ್ಡ ಮಹಾಮಳಿಗೆಗಳು ಔಷಧಿ ವಿಭಾಗ, ಗ್ರಾಹಕ ಸೇವೆ, ಸಾಮಾನು ವಾಪಸು ಪಡೆದುಕೊಳ್ಳುವ ಮತ್ತು ವಿದ್ಯುನ್ಮಾನ ಸರಕುಗಳ ವಿಭಾಗಗಳನ್ನು ಕೂಡ ಹೊಂದಿರುತ್ತವೆ.

ಕಿರಾಣಿ ವ್ಯಾಪಾರಿಯು ಗೃಹಕೃತ್ಯಕ್ಕೆ ಬೇಕಾದ ಚಿಲ್ಲರೆ ಸಾಮಾನುಗಳನ್ನು, ಮುಖ್ಯವಾಗಿ ಸಂಬಾರ ಜಿನಸಿ, ಒಣಹಣ್ಣುಗಳು, ಸಕ್ಕರೆ ಮುಂತಾದವನ್ನು, ಮಾರಾಟ ಮಾಡುವವ (ಗ್ರೋಸರ್). ಸರಕುಗಳನ್ನು ಒಟ್ಟಿನ ಮೇಲೆ (ಗ್ರೋಸ್) ಕೊಂಡು ಮಾರುವವರನ್ನು ಇಂಗ್ಲಿಷಿನಲ್ಲಿ ಗ್ರೋಸರ್ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಈ ಶಬ್ದದ ಅರ್ಥದಲ್ಲಿ ವ್ಯತ್ಯಾಸವಾಯಿತು. ಒಟ್ಟು ಮತ್ತು ಚಿಲ್ಲರೆ ವ್ಯಾಪಾರ ಮಾಡುವವರನ್ನೆಲ್ಲ ಗ್ರೋಸರ್ ಎಂದು ಕರೆಯುವ ವಾಡಿಕೆಯಿದೆ.

ಒಟ್ಟು ವ್ಯಾಪಾರಿಗಳು ಕಾರ್ಖಾನೆಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಕೊಂಡುಕೊಳ್ಳುತ್ತಾರೆ. ಅಥವಾ ವ್ಯವಸಾಯೋತ್ಪನ್ನವಾದರೆ ಅದರ ಉತ್ಪತ್ತಿ ಸ್ಥಾನದಿಂದ ಅವನ್ನು ಸಣ್ಣ ಗುಡ್ಡೆಯಾಗಿ ಕೊಂಡು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಇದರ ಕಾರ್ಯ.

ಸಾಮಾನ್ಯ ಗ್ರಾಹಕರಿಗೆ ಚಿಲ್ಲರೆ ವ್ಯಾಪಾರಿಗಳು ಅತಿಮುಖ್ಯ. ಇವರು ಎಲ್ಲ ಕಡೆಗಳಲ್ಲೂ ಉಂಟು. ವ್ಯಾಪಾರದ ಗಾತ್ರಕ್ಕೆ ಅನುಸಾರವಾಗಿ ಈ ಅಂಗಡಿಗಳ ಗಾತ್ರ ವ್ಯತ್ಯಾಸವಾಗುತ್ತದೆ. ಮನೆಯ ದಿನಬಳಕೆಯ ವಸ್ತುಗಳೆಲ್ಲ ಇಲ್ಲಿರುತ್ತವೆ. ಐರೋಪ್ಯ ದೇಶಗಳಲ್ಲಿ ಕಿರಾಣಿ ವರ್ತಕರು ಮಾಂಸ ಪದಾರ್ಥಗಳನ್ನೂ ಮಾರಾಟ ಮಾಡುತ್ತಾರೆ. ಭಾರತದಲ್ಲಿ ಹಾಗಲ್ಲ. ಮಾಂಸದ ಅಂಗಡಿಗಳು ಪ್ರತ್ಯೇಕವಾಗಿರುತ್ತವೆ.

ಸಣ್ಣ ಕಿರಾಣಿ ಅಂಗಡಿಗಳಿಗೆ ಕಾರ್ಖಾನೆಗಳೂ ಸಗಟು ವ್ಯಾಪಾರಿಗಳೂ ಆಲಂಬನ. ಸಾಮಾನ್ಯವಾಗಿ ಇವು ಏಕವ್ಯಕ್ತಿ ಅಥವಾ ಪಾಲುದಾರಿಕೆ ಉದ್ಯಮಗಳು. ಆದರೆ ಈ ವ್ಯಾಪಾರ ಮಾಡುವ ಸರಪಣಿ ಮಳಿಗೆಗಳೂ ಇಲಾಖಾ ಮಳಿಗೆಗಳೂ ಬಳಕೆದಾರರ ಸಹಕಾರ ಸಂಘಗಳೂ ಉಂಟು. ಇವು ಮಾರಾಟ ಮಾಡುವ ಸರಕುಗಳು ಸಾಮಾನ್ಯವಾಗಿ ಮುದ್ರಾಂಕಿತವಾದವು. ಅವುಗಳ ಮೇಲೆ ಲಾಭದ ಪ್ರಮಾಣ ಕಡಿಮೆ. ಆದರೆ ಅವು ಹೆಚ್ಚು ವ್ಯಾಪಾರ ಮಾಡುವುದರಿಂದ ಒಟ್ಟಿನಲ್ಲಿ ಲಾಭದಾಯಕವಾಗಿರುತ್ತದೆ. ಕಿರಾಣಿ ಅಂಗಡಿಗಳ ಒಂದು ದೊಡ್ಡ ಅನುಕೂಲವೆಂದರೆ ಗ್ರಾಹಕರೊಂದಿಗೆ ಅವು ಪಡೆಯುವ ವೈಯಕ್ತಿಕ ಸಂಪರ್ಕ. ಅವರ ರುಚಿಧರ್ಮಗಳನ್ನೂ ಬಯಕೆಗಳನ್ನೂ ಅಂಗಡಿಕಾರ ಚೆನ್ನಾಗಿ ಅರಿತಿರುತ್ತಾನೆ. ನಿತ್ಯಬಳಕೆಯ ಸರಕನ್ನು ಹೆಚ್ಚಾಗಿ ಕೊಂಡು ದಾಸ್ತಾನು ಮಾಡಿಕೊಳ್ಳಲಾಗದ ಅಸಂಖ್ಯಾತ ಅನುಭೋಗಿಗಳಿಗೆ ಕಿರಾಣಿ ಅಂಗಡಿ ಒಂದು ವರ. ಉದ್ದರಿ ಲೆಕ್ಕ, ಮನೆಮನೆಗೆ ಸರಕಿನ ಸರಬರಾಯಿ-ಮುಂತಾದ ಸೌಲಭ್ಯಗಳನ್ನೂ ಅದು ಒದಗಿಸುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
[[:wikisource:kn:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿ

ರಾಣಿ ವ್ಯಾಪಾರಿ|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿ

ರಾಣಿ ವ್ಯಾಪಾರಿ]]








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: http://kn.wikipedia.org/w/index.php?title=%E0%B2%95%E0%B2%BF%E0%B2%B0%E0%B2%BE%E0%B2%A3%E0%B2%BF_%E0%B2%85%E0%B2%82%E0%B2%97%E0%B2%A1%E0%B2%BF&printable=yes

Alternative Proxies:

Alternative Proxy

pFad Proxy

pFad v3 Proxy

pFad v4 Proxy