ವಿಷಯಕ್ಕೆ ಹೋಗು

ಶೇರ್ ಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೇರ್ ಷಾ ಸೂರಿ
ಆಳ್ವಿಕೆ 17 May 1540 – 15 May 1545
ಪಟ್ಟಾಭಿಷೇಕ 1540
ಪೂರ್ವಾಧಿಕಾರಿ ಹುಮಾಯೂನ್
ಉತ್ತರಾಧಿಕಾರಿ Islam Shah Suri
Malika Bibi
ಸಂತಾನ
Jalal Khan
ಮನೆತನ Sur dynasty
ತಂದೆ Mian Hassan Khan Sur
ಜನನ 1486
Sasaram, Rohtas district, Bihar in India
ಮರಣ 15 May 1545
Kalinjar, Bundelkhand
Burial Sher Shah Suri Tomb, Sasaram
ಧರ್ಮ Islam

ಶೇರ್ ಷಾ ಸೂರಿ(17 ಮೇ 1540 – 15 ಮೇ 1545) ಸೂರಿ ವಂಶದ ಸ್ಥಾಪಕ.ಶೇರ್ ಷಾ ಸೂರಿಯ ಪೊರ್ವಿಕರು ಆಫ್ಘ್‍ನ್ ಮೂಲದವರಾಗಿದ್ದು ಬಿಹಾರದ ಒಂದು ಭಾಗದಲ್ಲಿ ವಾಸಿಸುತ್ತಿದ್ದ ರು. ಶೇರ್ ಷಾ ನ ತಂದೆ ಹಸನ್ ಖಾನ್ ಸೂರಿ ಬಿಹಾರದ ಸಸ್ಸಾರಾಂ ನ ಜಹಾಗೀರುದಾರ ಆಗಿದ್ದನು . ಶೇರ್ ಷಾ ಕ್ರಿ.ಶ ೧೪೭೨ ರಲ್ಲಿ ಜನಿಸಿದನು. ಇವನ ಮೊದಲ ಹೆಸರು ಫರೀದ್ .ಹಸನ್ ಖಾನ್ ಸೂರಿಗೆ ನಾಲ್ಕು ಜನ ಹೆಂಡತಿಯರಿದ್ದು ಕೊನೆಯ ಹೆಂಡತಿ ಮಾನಸಿಕವಾಗಿ ಹಿಂಸಿಸುತ್ತಿದ್ದಳು, ಆದ್ದರಿಂದ ಮನನೊಂದ ಫರೀದ್ ಜುನಪುರಕ್ಕೆ ಓಡಿಹೋದನು. ಜುನಪುರದಲ್ಲಿ ಅರೇಬಿಕ್ ಮತ್ತು ಫರ್ಶಿಯನ್ ಭಾಷೆಗಳನ್ನು ಕಲಿತನು. ಕ್ರಿ ಶ ೧೪೯೭ ರಿಂದ ೧೫೧೮ ರವರೆಗೆ ದೆಹಲಿ ಸುಲ್ತಾನ ಇಬ್ರಾಹಿಂ ಲೊಧಿಯ ಸೈನ್ಯದಲ್ಲಿ ಸೇವೆಸಲ್ಲಿಸಿದನು. ನಂತರ ೧೫೨೧ ರಲ್ಲಿ ತನ್ನ ತಂದೆ ಮರಣಹೊಂದಿದ್ದರಿಂದ ಬಿಹಾರದ ಸಸ್ಸಾರಾಂ ಗೆ ಬಂದು ತನ್ನ ತಂದೆಯ ಜಹಾಗೀರನ್ನು ನೋಡಿಕೊಳ್ಳಲಾರಂಬಿಸಿದನು. ಆದರೆ ತನ್ನ ಮಲತಾಯಿಯ ಕಿರುಕುಳ ತಾಳಲಾರದೆ ದಕ್ಷಿಣ ಬಿಹಾರದ ಅರದ ಅರಸನಾದ ಬಹರ್‍ಖಾನ್ ಲೊಹಾನಿಯ ಸೈನ್ಯದಲ್ಲಿ ಸೇವೆಸಲ್ಲಿಸಿದನು. ಈ ಸಂದರ್ಭದಲ್ಲಿ ಬಹರ್ ಖಾನ್ ಲೊಹಾನಿ ಯ ಸಂಗಡ ಬೇಟೆಗೆ ಹೋದಾಗ ಫರೀದ್ ಒಬ್ಬನೇ ಹುಲಿಯನ್ನು ಕೊಂದನು. ಆಗ ತನ್ನ ಓಡೆಯ ಬಹಾರ್‍ಖಾನ್ ಲೊಹಾನಿಯಿಂದ ' ಷೆರ್ ಖಾನ್ ' ಎಂಬ ಬಿರುದು ಪಡೆದನು. ನಂತರ ಕ್ರಿ. ಶ ೧೫೨೭-೧೫೨೮ ರ ಅವಧಿಯಲ್ಲಿ ಬಾಬರ್ ನ ಸೈನ್ಯದಲ್ಲಿ ಸೇವೆ ಸಲ್ಲಿಸಿದನು. ಷೇರ್‍ಖಾನ್‍ನ ಸಾಧನೆಗಳನ್ನು ನಾವು ಎರಡು ಹಂತಗಳಲ್ಲಿ ಕಾಣಬಹುದು

  1. ಸೈನಿಕ ಸಾಧನೆಗಳು
  2. ಆಡಳಿತಾತ್ಮಕ ಸಾಧನೆಗಳು
"https://kn.wikipedia.org/w/index.php?title=ಶೇರ್_ಷಾ&oldid=1172655" ಇಂದ ಪಡೆಯಲ್ಪಟ್ಟಿದೆ
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy